Sunday, 23 February 2014

ಜುಟ್ಟಿನ ಹಿಂದೆ

ನನ್ನ ಹೆಂಡತಿ ವಿದ್ಯಾಳಿಗೆ ಐದು ತಿಂಗಳಿನಿಂದ ಒಂದೇ ಚಿಂತೆ - ನನ್ನ ಮಗಳಿಗೆ ಜುಟ್ಟು ಯಾವಾಗ ಹಾಕುವುದೆಂದು ? ಪ್ರತಿ ದಿನ ಅವಳ ಸ್ನಾನ ಆದ ನಂತರ, ಸಾಕ್ಷಿ ನಿನ್ನ ತಲೆಗೂದಲು ಯಾವಾಗ ಉದ್ದ ಬೆಳೆಯುವುದು, ನಾನು ಯಾವಾಗ ನಿನಗೆ ಜುಟ್ಟು ಹಾಕುವುದು, ನೀನು ಹೂವು ಯಾವಾಗ ಮುಡಿಯುವುದು .... ಹೀಗೆ ಜುಟ್ಟಿನ ಹಿಂದೆ ಒಂದರ ಹಿಂದೆ ಒಂದು ಪ್ರಶ್ನೆ. 


೨೦೧೪ ಫೆಬ್ರವರಿ  ೨೨, ಅವಳ ಕನಸು ನನಸಾಯಿತು. ಸಾಕ್ಷಿಗೆ ಚೋಟುದ್ದ ಜುಟ್ಟು ಹಾಕಿ (ಬಲು ಸಾಹಸ ಪಟ್ಟು) ಒಂದು ಗುಲಾಬಿಯನ್ನು ಮುಡಿಸಿ, ಅಬ್ಬ ಎಂದು ಸಂತೋಷ ಪಟ್ಟಳು ವಿದ್ಯಾ.

ಈ ಕಡೆ ಸಾಕ್ಷಿ ತನ್ನ ಪುಟ್ಟ ಜುಟ್ಟನ್ನು ಎಲ್ಲರಿಗೂ ತೋರಿಸಿ, ಹಿಗ್ಗಿ ನಲಿದು, ನವಿಲಿನಂತೆ ಗರ್ವದಿಂದ ಜಿಗಿದು ಕುಣಿದಾಡಿದಳು. ಇನ್ನು ಜುಟ್ಟಿನಿಂದ ಜಡೆಯ ಕಡೆಗೆ ಪ್ರಯಾಣ ...............




1 comment: