Thursday 15 August 2013

ಅಮ್ಮ

" ನನ್ನ ಅಮ್ಮ "
ನವಮಾಸ ನಿನ್ನ ಒಡಲೊಳಗೆ ನನ್ನ ಹೊತ್ತು
ಭುವಿಗೆ ಸ್ವಾಗತಿಸಿದ ಅಮ್ಮನಿಗೆ ನಮೋ ನಮಃ
ನಾನು ನಾನಾಗಲು ಪ್ರೇರೇಪಿಸಿದ ತಾಯಿಯೇ ನಮೋ ನಮಃ

ಅಕ್ಷರ ಮಾಲೆಯ ಅಕ್ಕರದಿ ಕಲಿಸಿ
ನೀತಿ ಪಾಟಗಳ ಸನ್ಮಾರ್ಗದಲಿ ನಡೆಸಿದ
ನನ್ನ ಪ್ರೀತಿಯ ಗುರುವೇ  ನಮೋ ನಮಃ

ನನ್ನ ಆಟ ಪಾಟಗಳಲಿ ಹರುಷವ ಕಂಡು
ನನ್ನ ನೋವನ್ನು ನಿನ್ನ ನೋವೆಂದು ನೊಂದು
ಉಸಿರಿಗೆ ಉಸಿರಾದ ಉಸಿರೇ ನಮೋ ನಮಃ

ರಸದೂಟವ ನನಗೆಂದು ಉಣ ಬಡಿಸಿ
ಅದರ ಸವಿಯಲ್ಲೇ ತಂಗಳನ್ನವ ಉಂಡು
ಪೋಷಿಸಿದ ಅನ್ನಪೂರ್ಣಳೆ ನಮೋ ನಮಃ

ಸಂಸಾರ ನಾವೆಯ ನಗುವಿಂದಲೇ ಸಾಗಿಸಿ
ಸೂರಾದೆ ನೀ ಕಷ್ಟಗಳ ಮಳೆ ಸುರಿಯೆ
ನನ್ನ ದೈನಂದಿನ ಶಕ್ತಿಯೇ ನಮೋ ನಮಃ

ಕಾರಣವಿಲ್ಲದೆ ಕಾರಣವಾದ
ನಗುತಲಿ ಅಳುವುದ ಸಾರಿ ಹೋದ
ನನ್ನ ಜೀವನದಿಯೇ ನಮೋ ನಮಃ

ಆ ದಿನದ ನನ್ನ ಅಳು ನಿನ್ನ ನಗು
ಈ ದಿನದ ನಿನ್ನ ನಗು ನನ್ನ ಅಳು
ಆ ಪರಮಾತ್ಮನಿಗೇ ಒಗಟು ಹೇಳಿದ ಸುಚರಿತಳೇ ನಮೋ ನಮಃ

ವಿದಾಯ ಹೇಳಿ ನಾ ದೂರವಾಗಲಾರೆ
ಕಣ್ಣೀರಿಟ್ಟು ನಿನ್ನ ನಾ ಹೋಗಿ ಬಾ ಎಂದ್ದೆನ್ನಲಾರೆ
ಮರಣವೇ ಸತ್ಯವಾದರೆ ಆ ಮರಣದ ಮೇಲಾಣೆ
ಮತ್ತೆ ಹುಟ್ಟಿ ಬರುವೆ ನಾ ನಿನ್ನ ಕಂದನಾಗಿ

ಜನ್ಮವಿತ್ತ ಅಮ್ಮನಿಗೆ ನಿನ್ನ ಮಗ ವಿಶ್ವನಾಥನ ಅಶ್ರು ತರ್ಪಣ

2 comments:

  1. May Amma's Soul Rest In PEACE ... Sorry for not being along :( with my dearest buddy at times

    All but to blame myself for not being in contact with you my dear Kashi.

    Rgrds Mahesh, Schoolmate.

    ReplyDelete