ಜನವರಿ ೦೧ ೨೦೦೮ ನನ್ನ ಸ್ನೇಹಿತೆ ದೀಪಾಳ ಮನೆಯಲ್ಲಿ ನಾನು , ಶ್ರೀಧರ್ , ದೀಪಾ ಮತ್ತು ಮಂಜುಳಾ ಆಂಟಿ ಹೊಸ ವರ್ಷದ ಸಡಗರದಿ ಕೇಕ್ ಅನ್ನು ಕಟ್ ಮಾಡಿ ಕೇರಂ ಬೋರ್ಡ್ ಆಟವಾಡಿ ಮಾತಾಡಿಕೊಂಡು ಹೊಸ ವರ್ಷವನ್ನು ಸ್ವಾಗತಿಸಿದೆವು.
Professional life :-
- ಫೆಬ್ರವರಿ ತಿಂಗಳಲ್ಲಿ ನಾನು Team Manager ಆಗಿ AOL ನಿಂದ ಪತ್ರ ಪಡೆದೆ. AOL Internship Managementನ ತರಬೇತಿಯಲ್ಲಿ ಹೊಸ ವಿಷಯಗಳನ್ನು ತಿಳಿದುಕೊಂಡೆ. ಅದೇ ತರಬೇತಿಯಲ್ಲಿ CBTL ( Certified BPO Team Leader ) certificate ಅನ್ನು ನನ್ನದಾಗಿಸಿಕೊಂಡೆ. ತರಹಾವರಿ ಪ್ರಯೋಗಗಳನ್ನು ನನ್ನ ಪಂಗಡದ ಮೇಲೆ ಮಾಡಿ ಮುಟ್ಟಬೇಕಾದ ಗುರಿಯನ್ನು ಮುಟ್ಟಿದೆ.
ಯಾವುದೇ ಅನುಭವವಿಲ್ಲದೆ AOL call centre ಪ್ರವೇಶಿಸಿದ ನಾನು ೪ ವರ್ಷದಲ್ಲಿ ಬಹಳಷ್ಟು ವಿಷಯಗಳನ್ನು ತಿಳಿದುಕೊಂಡು,ಪ್ರಗತಿಯ ಮೆಟ್ಟಿಲನ್ನು ಹಂತ ಹಂತವಾಗಿ ಏರಿದೆ. Captive centre ನಿಂದ Outsourced centre ಆಗಿ AEGIS ನ ಆಡಳಿತದಲ್ಲಿ ನಾನು ಒಬ್ಬನಾದೆ.
ದಿನಾಗಲು ೧೪ ಗಂಟೆಗಳಿಂದ ೧೬ ಗಂಟೆಗಳ ಕಾಲ ಕಛೇರಿಯಲ್ಲಿ ಕಳೆಯಲಾರಂಭಿಸಿದೆ. ಇದುವರೆಗೂ ಅಷ್ಟೊಂದು ಸ್ನೇಹಿತರನ್ನು ಹಚ್ಚಿಕೊಂಡಿರಲಿಲ್ಲ ಆದರೆ ೨೦೦೮ ಡಿಸೆಂಬರ್ನಲ್ಲಿ ನನ್ನ ಗೆಳೆಯರ ಬಳಗ ಎಂದಿಗಿಂತ ಹೆಚ್ಚಾಗಿ ಬೆಳೆದಿತ್ತು.
ಅಗಾಗ ಸಾಕಪ್ಪಾ ಸಾಕು ಇನ್ನು ಆಗದು ಈ ತಲೆ ಬಿಸಿ ಅಂದು ಕೊಂಡಾಗಲೇ ಯಾವುದು ಹೊಸ ಪಾಲಿಸಿಯ ಪರಿಚಯ ಮತ್ತೆ ಅದರ ಹಿಂದೆ ನನ್ನ ಓಟ. ಹೀಗೆ ಪ್ರತಿ ದಿನವು ಹೊರ ಜಗತ್ತಿನ ನೋವನ್ನು ಮರೆಸಿ ಹೊಸ ಚೇತನವನ್ನು ನನಗೆ ತಂದು ಕೊಟ್ಟ ಕೆಲಸಕ್ಕೆ ಕೋಟಿ ಪ್ರಣಾಮ.
Personal Life :-
- ಫೆಬ್ರವರಿಯಲ್ಲಿ ಬೆರಳಿಗೆ ಹಾಕಿದ್ದ ಉಂಗುರವನ್ನು ಬಿಚ್ಚಿಟ್ಟೆ. ಬ್ರಹ್ಮೆಯ ಮತ್ತು ನನ್ನ ಸ್ನೇಹ ಇನ್ನಷ್ಟು ಬಲವಾಯಿತು. ನನ್ನ ತಂಗಿ ಮತ್ತು ಭಾವ , ಸ್ಕಂದನ ಆರೋಗ್ಯದ ಸಲುವಾಗಿ ಬೆಂಗಳೂರಿಗೆ ಬಂದರು. ಬಹುಷಃ ನನ್ನ ಪ್ರೀತಿಯ ಸ್ಕಂದ ಹತ್ತಿರವಾಗದಿದ್ದರೆ ಆಫಿಸಿನಲ್ಲೇ ಮಲಗಿಬಿಡುತ್ತಿದ್ದೆ. ೨೦೦೮ರ ಹಾನಿಯೆಂದರೆ ನಾನು ೮ ಕೇಜಿ ತೂಕ ಕಳೆದುಕೊಂಡೆ. ಹಸಿವಿನ ಪರಿವೆ ಆಗಲ್ಲಿಲ್ಲಾ. ಏಕಾಂತದ ನನ್ನ ರೈಲ್ವೆ ಅನುಭವಗಳು ಮತ್ತೆ ನನ್ನದಾಗಿತ್ತು. ಯಾವುದೊಂದು ಕವನ ಗೀಚಲಿಲ್ಲ , ಯಾವುದೇ ಚಿತ್ರ ಬಿಡಿಸಲಿಲ್ಲ , ಯಾರ ಮತ್ತು ಯಾವ ವಿಷಯದಲ್ಲೂ ನನಗೆ ಆಸಕ್ತಿ ಇರಲಿಲ್ಲಾ. ನನ್ನಷ್ಟಿಗೆ ನಾನು ಖುಷಿಯಿಂದಿದ್ದೆ . ಹಲವಾರು ಸ್ನೇಹಿತರ ಮಾಡುವೆ ಆಯಿತು , ಕೆಲವರು ದೂರ ಸರಿದಿದ್ದರು , ಕೆಲವರನ್ನು ನಾನೇ ದೂರವಿಟ್ಟೆ. ದೇವರ ಕೃಪೆಯಿಂದ ಮನೆಯಲ್ಲಿ ಎಲ್ಲರೂ ಆರೋಗ್ಯದಿಂದ್ದಿದ್ದರು. ನನ್ನ ನಿದ್ದೆ ಮಾಯವಾಗಿತ್ತು. ಹುಡುಕಾಟದ ಗೊಂದಲದಲ್ಲಿ ೨೦೦೮ರಲ್ಲಿ ಸಿಲುಕಿದೆ.
Travel :-
- ಗಾಲಿಬೋರೆ ಜಂಗಲ್ ರೆಸಾರ್ಟ್
- ಅಂಡಮಾನ್ ದ್ವೀಪ
- ಪೊಂಡಿಚೆರಿ
- ವೆಲಂಕನಿ
- ನಾಗರಹೊಳೆ
- ಹಂಪಿ
- ತಲಕಾಡು
- ಗೋವಾ
Plans for 2009 :-
- ಇತಿಹಾಸದ ಚಕ್ರ ತಿರುಗಿ ಬ್ರಹ್ಮೆಯ ಲೋಕ ಇನ್ನಷ್ಟು ರಂಗಾಗಲಿ.
ಸ್ಕಂದ rocks ! heil Skanda! ಪಿಂಟಿಗೆ ಜೈ !