Thursday, 13 November 2008

ಕನ್ನಡದ ಎರಡನೆ ರಚನೆ

ಯಾಕೋ ಏನೋ ಕನ್ನಡದಲ್ಲಿ ಬರೆಯಲು ಕುಳಿತಾಗಲೆಲ್ಲ ಒಂದಲ್ಲ ಒಂದು ಅಡಚಣೆ ಬರುತಲೆ ಇದೆ , ಆದರೆ ಇವತ್ತು ಏನಾದರು ಆಗಲೀ ಬರೆಯಲೇ ಬೇಕು ಅಂಥ ಕುಳಿತುಕೊಂಡೆ .... ಅಬ್ಭಾ ! ಏಷ್ಟು ಆಲೋಚನೆಗಳು , ಏಷ್ಟು ಅನುಭವಗಳು --- ಬಹಳಷ್ಟು ವಿಚಾರಗಳನ್ನು ಆಂಗ್ಲ ಬಾಷೆಯಲ್ಲಿ ಬರೆದು ಬಿಟ್ಟಿರುವೆ ಮುಂದೆ ಆಗುವ ಘಟನೆಗಳನ್ನು ಕನ್ನಡದಲ್ಲಿ ಬರೆಯಬೇಕೆಂಬ ಆಸೆ ಆದರೆ ಈ ಬ್ಲಾಗ್ ನ ಕನ್ನಡ ಅಕ್ಷರ ನನಗೆ ಬಾಯಿ ಪಾಠ ಆಗುವ ವರೆಗೆ ಕಷ್ಟ.

ಪ್ರತಿಯೊಂದು ಅಕ್ಷರ ಬರೆದಾಗಲು ಮತ್ತೆ ಮತ್ತೆ ಪರಿಶೀಲಿಸ ಬೇಕಾದ ಸಂದರ್ಭ , ಕೆಲವು ಅಕ್ಷರಗಳ್ಳನು ಹೇಗೆ ಬರೆಯಬೇಕು ಅಂತ ನನಗೆ ಅರ್ಥವಾಗುವಸ್ಟರಲ್ಲಿ ನನ್ನ ಯೋಚನಾ ಶಕ್ತಿ ತನ್ನ ಹರಿವನ್ನು ಮರೆತು ಬಿಟ್ತಿರುತ್ತದೆ.

ನೋಡುವ ಸಮಯ ಸಿಕ್ಕಾಗಲೆಲ್ಲಾ ಅಭ್ಯಾಸ ಮಾಡಿ ನನ್ನ ಈ ಕನ್ನಡದ ಇಂಗಿತವನ್ನು ತೀರಿಸಿಕೊಳ್ಳುತ್ತೇನೆ .......

1 comment:

  1. ಕಾಶಿ, ನನಗು ಬಹಳ ದಿನಗಳಿಂದ ಕನ್ನಡದಲ್ಲಿ ಬರೆಯಬೇಕು ಅನ್ನಿಸ್ತಾ ಇದೆ, ನಾನು ಏನೇನೋ ಯೋಜನೆಗಳನ್ನ ಹಾಕೊಕೊಂಡಿದೀನಿ. ಏನು ಆಗುತ್ತೋ ನೋಡಬೇಕು. ನಿನ್ನ ಪ್ರಯತ್ನ ಯಶಸ್ವಿಯಾಗಲಿ ಅಂತ ಹಾರೈಸುವೆ.

    ReplyDelete